
ಐಐಟಿ ಬಾಂಬೆ ಟಾಪರ್ ಆಗಿರುವ 23 ವರ್ಷದ ಯೋಗೇಶ್ ಸಾಹು ಅವರು ತಮ್ಮ ಐಎಎಸ್ ಅಧಿಕಾರಿಯಾಗುವ ಕನಸಿಗಾಗಿ 18 ಲಕ್ಷ ರೂಪಾಯಿ ಪ್ಯಾಕೇಜ್‌ನ ಉದ್ಯೋಗದ ಅವಕಾಶವನ್ನು ತ್ಯಜಿಸಿದ್ದಾರೆ.
ವೃತ್ತಿಯಲ್ಲಿ ಚಾಲಕರಾಗಿರುವ ಯೋಗೇಶ್ ಅವರ ತಂದೆ ತಿಂಗಳಿಗೆ 20 ಸಾವಿರ ರೂಪಾಯಿ ದುಡಿಯುತ್ತಿದ್ದು, ಮಗನ ಸಿವಿಲ್ ಸರ್ವೀಸಸ್ ಕನಸಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ.
ಕುಟುಂಬದ ಬಡತನವನ್ನು ನೀಗಿಸಲು ಮತ್ತು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಯೋಗೇಶ್ ಸಾಹು ಅವರು ಪ್ರಸ್ತುತ ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.