
ಬೆಂಗಳೂರಿನಲ್ಲಿ ನಕಲಿ ಔಷಧ ಜಾಲ ಪತ್ತೆಯಾದ ಹಿನ್ನೆಲೆಯಲ್ಲಿ, ರೋಗಿಗಳ ಸುರಕ್ಷತೆಗಾಗಿ ಖಾಸಗಿ ಆಸ್ಪತ್ರೆಗಳ ಒಕ್ಕೂಟ (PHANA) ತನ್ನ ವ್ಯಾಪ್ತಿಯ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಔಷಧ ಪರಿಶೀಲನಾ ಮಾರ್ಗಸೂಚಿಗಳನ್ನು ನೀಡಿದೆ.
ಆಸ್ಪತ್ರೆಗಳು ಔಷಧ ಖರೀದಿಸುವಾಗ ತಯಾರಕರು, ಡಿಸ್ಟ್ರಿಬ್ಯೂಟರ್ಗಳ ಪರವಾನಗಿ, ಬ್ಯಾಚ್ ನಂಬರ್, ತಯಾರಿಕಾ ದಿನಾಂಕ ಮತ್ತು ಅವಧಿ ಮುಕ್ತಾಯ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಅಧ್ಯಕ್ಷೆ ಶೋಭಾ ಪ್ರಕಾಶ್ ಸೂಚಿಸಿದ್ದಾರೆ.
ಅನುಮಾನಾಸ್ಪದ ಔಷಧಗಳು ಕಂಡುಬಂದಲ್ಲಿ ಅವುಗಳನ್ನು ಪ್ರತ್ಯೇಕವಾಗಿರಿಸಿ, ಬ್ಯಾಚ್ವಾರು ದಾಖಲೆಗಳನ್ನು ನಿರ್ವಹಿಸುವ ಮೂಲಕ ಔಷಧದ ಮೂಲ ಮತ್ತು ಬಳಕೆಯ ಸಂಪೂರ್ಣ ಟ್ರೇಸಬಿಲಿಟಿ ಕಾಯ್ದುಕೊಳ್ಳಲು ಆಸ್ಪತ್ರೆಗಳಿಗೆ ಆದೇಶಿಸಲಾಗಿದೆ.