
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿ ನೀಟ್, ಯುಜಿ ಸಿಇಟಿ ಮತ್ತು ಡಿಸಿಇಟಿ 2026ರ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಸೋಮವಾರ ಬಿಡುಗಡೆ ಮಾಡಿದೆ.
ಡಿಸಿಇಟಿ ಮೊದಲ ಸುತ್ತಿನ 13,152 ಸೀಟುಗಳ ಪೈಕಿ 10,348 ಸೀಟುಗಳು ಹಂಚಿಕೆಯಾಗಿದ್ದು, ಅಭ್ಯರ್ಥಿಗಳು ತಮ್ಮ ಆಯ್ಕೆಗಳನ್ನು ಬದಲಾಯಿಸಲು ಆಗಸ್ಟ್ 20ರ ಬೆಳಿಗ್ಗೆ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಯುಜಿ ನೀಟ್ ಅರ್ಹತೆ ಪಡೆದು ಇದುವರೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಆಗಸ್ಟ್ 18ರ ಸಂಜೆ 6 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಕೆಇಎ ಅಂತಿಮ ಅವಕಾಶ ಕಲ್ಪಿಸಿದೆ.