
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಿದ್ದನಕೊಡಿಗೆ ಕಾಲೋನಿಯಲ್ಲಿ, ಶಾಲಾ ಬಸ್‌ಗಾಗಿ ಕಾಯುತ್ತಿದ್ದ ಆರು ವಿದ್ಯಾರ್ಥಿಗಳತ್ತ ಒಂಟಿ ಕಾಡಾನೆ ನುಗ್ಗಿ ಅಟ್ಟಿಸಿಕೊಂಡು ಬಂದ ಘಟನೆ ಮಂಗಳವಾರ ನಡೆದಿದೆ.
ಮಕ್ಕಳು ಪ್ರಾಣ ಉಳಿಸಿಕೊಳ್ಳಲು ಬ್ಯಾಗ್‌ಗಳನ್ನು ಬಿಟ್ಟು ಓಡಿಹೋಗಿದ್ದು, ಕಾಡಾನೆ ಕೆಲ ದೂರ ಹಿಂಬಾಲಿಸಿ ಬಳಿಕ ಅಕೇಶಿಯಾ ತೋಪಿನತ್ತ ತೆರಳಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಳೆದ ಆರು ತಿಂಗಳಿಂದ ಈ ಭಾಗದಲ್ಲಿ ಮೂರು ಒಂಟಿ ಕಾಡಾನೆಗಳು ಸಂಚರಿಸುತ್ತಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.