
ಕೇಂದ್ರ ಸರ್ಕಾರಿ ನೌಕರರ 8ನೇ ವೇತನ ಆಯೋಗವು ತನ್ನ 18 ತಿಂಗಳ ಅವಧಿಯಲ್ಲಿ 11 ತಿಂಗಳು ಪೂರ್ಣಗೊಳಿಸಿದ್ದು, ವಿವಿಧ ನಗರಗಳಲ್ಲಿ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.
ಎಲ್ಲಾ ಸಮಾಲೋಚನೆಗಳು ಪೂರ್ಣಗೊಂಡು 2027ರ ಫೆಬ್ರವರಿ, ಮಾರ್ಚ್ ಅಥವಾ ಮೇ ತಿಂಗಳ ವೇಳೆಗೆ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆಯಿದೆ.
ವರದಿ ಸಲ್ಲಿಕೆಯ ನಂತರ ಸರ್ಕಾರದ ಪರಿಶೀಲನೆ ಮತ್ತು ಅನುಮೋದನೆಗೆ ಕೆಲ ತಿಂಗಳು ಬೇಕಾಗಲಿದ್ದು, ಪರಿಷ್ಕೃತ ವೇತನ ಜನವರಿ 1, 2026 ರಿಂದ ಅನ್ವಯವಾಗುವ ನಿರೀಕ್ಷೆಯಿದೆ.