
ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದ ವಿಡಿಯೋಗಳು ನಕಲಿ ಹಾಗೂ ಎಐ ಸೃಷ್ಟಿ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಸೇನೆಯ ಸ್ಪಷ್ಟನೆಯ ಬೆನ್ನಲ್ಲೇ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಪಕ್ಷವು ದೇಶಕ್ಕೆ ಬೇಷರತ್ ಕ್ಷಮೆಯಾಚಿಸಬೇಕೆಂದು ಕಠಿಣವಾಗಿ ಆಗ್ರಹಿಸಿದ್ದಾರೆ.
ಸಿಕ್ಕಿಂ ಗಡಿಯ ವಾಣಿಜ್ಯ ವಾಹನಗಳ ಸಂಚಾರದ ದೃಶ್ಯ ಹಾಗೂ ಹಿಂದಿನ ಹಳೆಯ ಭಾಷಣದ ದೃಶ್ಯಗಳನ್ನು ತಿರುಚಿ ಡೀಪ್ಫೇಕ್ ವಿಡಿಯೋ ಹರಿಯಬಿಡಲಾಗಿದೆ ಎಂದು ಸೇನೆ ತಿಳಿಸಿದೆ.