
ಶಿರಸಿಯ ಮೂವರು ಯುವಕರು ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನದ ಮೂಲಕ ನೆಟ್‌ವರ್ಕ್ ಇಲ್ಲದ ಕಾಡು ಹಾಗೂ ಗ್ರಾಮೀಣ ಭಾಗಗಳಲ್ಲಿ 4G ಇಂಟರ್ನೆಟ್ ಪಡೆಯಬಹುದಾಗಿದೆ.
ಬೆಂಗಳೂರಿನ ಲೇಖಾ ವೈರ್‌ಲೆಸ್ ಸೊಲ್ಯೂಷನ್ಸ್ ಸಹಯೋಗದಲ್ಲಿ ನೆಕ್ಸಸ್ ಸ್ಪೆರಿಕಲ್ ಟೆಕ್ನಾಲಜೀಸ್ ಸಂಸ್ಥೆಯು ಮೈಕ್ರೋ ಸೆಲ್ ಮತ್ತು ಫೆಮ್ಟೋಸೆಲ್ ಉಪಕರಣಗಳನ್ನು ತಯಾರಿಸಿದೆ.
ಉತ್ತರ ಕನ್ನಡದ ಯಲ್ಲಾಪುರದಲ್ಲಿ ನಡೆಸಿದ ಮೈಕ್ರೋ ಸೆಲ್ ಪ್ರಾಯೋಗಿಕ ಪರೀಕ್ಷೆ ಸಂಪೂರ್ಣ ಯಶಸ್ವಿಯಾಗಿದೆ.