
ಯುವ ಸಮೂಹದಲ್ಲಿ ಹೆಚ್ಚುತ್ತಿರುವ ಹೆಚ್ಐವಿ ಸೋಂಕಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಜಾರಿಗೆ ತಂದ ಕ್ಯೂಆರ್ ಕೋಡ್ ಸ್ವಯಂ ತಪಾಸಣೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬರೋಬ್ಬರಿ 6 ಲಕ್ಷ ಜನರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಪಾಸಣೆ ಮಾಡಿಕೊಂಡಿದ್ದು, ಈ ಪೈಕಿ 5 ಸಾವಿರ ಜನರಲ್ಲಿ ಹೆಚ್ಐವಿ ರಿಸ್ಕ್ ಕಂಡುಬಂದಿದೆ ಎಂದು ಇಲಾಖೆ ತಿಳಿಸಿದೆ.
ಈ ಅಭಿಯಾನದಲ್ಲಿ ಗೌಪ್ಯತೆಗೆ ಸಂಪೂರ್ಣ ಭರವಸೆ ನೀಡಲಾಗಿದ್ದು, ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಹೆಸರನ್ನು ಎಲ್ಲಿಯೂ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.