
ಹಾಲಿ ಚಾಂಪಿಯನ್ ಶ್ರೀಲಂಕಾ ಮಹಿಳಾ ತಂಡವು ಪಾಕಿಸ್ತಾನ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 5 ವಿಕೆಟ್ಗೆ 130 ರನ್ ಗಳಿಸಿತು. ನಾಯಕಿ ಫಾತಿಮಾ ಸನಾ ಅಜೇಯ 47 ರನ್ ಗಳಿಸಿ ಇನ್ನಂಗ್ಸ್ ಸ್ಥಿರಗೊಳಿಸಿದರು.
ಗುರಿ ಬೆನ್ನಟ್ಟಿದ ಲಂಕಾ ಪರ ಹರ್ಷಿತಾ ಸಮರವಿಕ್ರಮ (36) ಮತ್ತು ಕವಿಶಾ ದಿಲ್ಹಾರಿ (33) ಅರ್ಧಶತಕದ ಜೊತೆಯಾಟವಾಡಿ, ಅಂತಿಮವಾಗಿ ನಿಲಾಕ್ಷಿ ಡಿ ಸಿಲ್ವಾ ಜಯ ತಂದಿತ್ತರು.