
ಬಿಹಾರದ ಗಯಾ ಮೂಲದ ಮಾಡೆಲ್ ತಾನಿಯಾ ಮಿಶ್ರಾ ಅವರು ತಮ್ಮ ಆಕರ್ಷಕ ಫೋಟೋಶೂಟ್ಗಳು ಮತ್ತು ಸೌಂದರ್ಯದಿಂದ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರನ್ನು ಹೊಸ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಿದ್ದಾರೆ.
ಮಗಧ ವಿಶ್ವವಿದ್ಯಾಲಯದಿಂದ ಬಿ.ಕಾಮ್ ಪದವಿ ಪಡೆದಿರುವ ಇವರು 2019ರ 'ಐಎಡಬ್ಲ್ಯೂಎ ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ ನಾಲ್ಕನೇ ರನ್ನರ್ ಅಪ್ ಆಗಿದ್ದರು ಹಾಗೂ ಫೆಮಿನಾ ಅಚೀವರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾಡೆಲಿಂಗ್ ಜೊತೆಗೆ 'ಚೇಸ್' ಸಿನಿಮಾದಲ್ಲಿ ಸಿಬಿಐ ಇನ್ಸ್ಪೆಕ್ಟರ್ ಪಾತ್ರ ಹಾಗೂ ಜಾಕಿ ಶ್ರಾಫ್ ಅವರ 'ಚಿಡಿಯಾ ಉಡ್' ವೆಬ್ ಸೀರೀಸ್ ಮೂಲಕವೂ ಅವರು ನಟನೆಯಲ್ಲಿ ಗುರುತಿಸಿಕೊಂಡಿದ್ದಾರೆ.