
2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷವು ರಾಮನಗರದಲ್ಲಿ ತನ್ನ ಪ್ರಾಬಲ್ಯವನ್ನು ಮರುಗಳಿಸಲು ಹೊಸ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಚುನಾವಣಾ ಸಿದ್ಧತೆಗಾಗಿ ರಾಮನಗರದಲ್ಲಿ ಪಕ್ಷದ ಜಿಲ್ಲಾ ಕಚೇರಿಯನ್ನು ತೆರೆಯಲಾಗಿದ್ದು, ಇದುವರೆಗೆ ಕಚೇರಿ ಇಲ್ಲದೆ ಅಸಮಾಧಾನಗೊಂಡಿದ್ದ ಕಾರ್ಯಕರ್ತರಿಗೆ ಬೂಸ್ಟ್ ನೀಡಲಾಗಿದೆ.
2004 ರಿಂದ 2023ರವರೆಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರವನ್ನು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ವಶಪಡಿಸಿಕೊಂಡಿದ್ದು, ಇದೀಗ ಅದನ್ನು ಮರಳಿ ಪಡೆಯಲು ದಳಪತಿಗಳು ಮುಂದಾಗಿದ್ದಾರೆ.