
ಭಾರತದಲ್ಲಿ 2026ರ ಮೊದಲಾರ್ಧದಲ್ಲಿ ಮೊಬೈಲ್ ಫೋನ್ಗಳ ಬೆಲೆಯು ಸರಾಸರಿ ಶೇ 16ರಷ್ಟು ಹೆಚ್ಚಳ ಕಂಡಿದೆ ಎಂದು ಕೌಂಟರ್ಪಾಯಿಂಟ್ ರಿಸರ್ಚ್ ತಿಳಿಸಿದೆ.
ಮೆಮೊರಿ ಚಿಪ್ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದ ಆಮದು ಸರಕುಗಳ ಬೆಲೆ ಹೆಚ್ಚಾಗಿರುವುದು ಈ ದರ ಏರಿಕೆಗೆ ಕಾರಣವಾಗಿದೆ.
₹10 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ಗಳ ಮಾರಾಟವು ಶೇ 65ರಷ್ಟು ಕುಸಿದಿದ್ದರೆ, ₹20 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಫೋನ್ಗಳ ಮಾರಾಟ ಹೆಚ್ಚಾಗಿದೆ.