
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಜಲ್ಸಾ ನಿವಾಸದ ಹೊರಗೆ ಬುಲೆಟ್‌ಪ್ರೂಫ್ ಗ್ಲಾಸ್ ಕವರ್ ಹಿಂದೆ ನಿಂತು ಅಭಿಮಾನಿಗಳನ್ನು ಭೇಟಿಯಾದ ಘಟನೆ ಆತಂಕ ಮೂಡಿಸಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಗ್ಯಾಂಗ್‌ಸ್ಟರ್ ಹಾಗೂ ಸುಲಿಗೆಕೋರರಿಂದ ಬಾಲಿವುಡ್‌ಗೆ ಎದುರಾಗಿರುವ ಭದ್ರತಾ ಆತಂಕ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ.
ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಶ್ಯಾಮ್ ಲಾಲ್ ಗುಪ್ತಾ ಅವರು ಬಾಲಿವುಡ್ ಕಲಾವಿದರಿಗೆ ಗರಿಷ್ಠ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.