
ಕೆಪಿಎಸ್ಸಿ ಮೂಲಕ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ದುಗ್ಗಪ್ಪ ಎಂಬ ಹೊಸ ಹೆಸರು ಮುನ್ನೆಲೆಗೆ ಬಂದಿದ್ದು, ಇದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿವಶಂಕರಪ್ಪ ಸಾಹುಕಾರ್ ಪಿಎ ಜೊತೆ ದುಗ್ಗಪ್ಪ ಚಾಟಿಂಗ್ ಮಾಡಿದ್ದು, ಹಲವು ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಹಾಗೂ ಹಾಲ್ ಟಿಕೆಟ್ ಫೋಟೋಗಳ ಪ್ರಮುಖ ವಿವರಗಳು ಪತ್ತೆಯಾಗಿವೆ.
ದಾವಣಗೆರೆ ಮೂಲದವರಾದ ದುಗ್ಗಪ್ಪ ಹಿಂದೆ ಸಬ್ ಇನ್ಸ್ಪೆಕ್ಟರ್, ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಹಿರಿಯೂರಿನಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.