
ಮಹಿಳಾ ಏಷ್ಯಾಕಪ್ ಪಂದ್ಯದಲ್ಲಿ ಶಫಾಲಿ ವರ್ಮಾ ಔಟ್ ಆದಾಗ ಆಕ್ರಮಣಕಾರಿಯಾಗಿ ವರ್ತಿಸಿದ ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ಪಂದ್ಯ ಶುಲ್ಕದ 10% ದಂಡ ವಿಧಿಸಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಉಲ್ಲಂಘಿಸಿದ್ದಕ್ಕಾಗಿ ಫಾತಿಮಾಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದ್ದು, ಕಳೆದ 24 ತಿಂಗಳಲ್ಲಿ ಇದು ಅವರ ಎರಡನೇ ಅಪರಾಧವಾಗಿದೆ.
ಈ ಹಿಂದೆ ಆಗಸ್ಟ್ 6, 2025ರಂದು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದ ಫಾತಿಮಾ, ಇದೀಗ ಒಟ್ಟು ಎರಡು ಡಿಮೆರಿಟ್ ಅಂಕಗಳನ್ನು ಹೊಂದಿದ್ದಾರೆ.