
ಏಷ್ಯಾಕಪ್ನ ಗುಂಪು ಹಂತದಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದಿರುವ ಭಾರತ ಮಹಿಳಾ ತಂಡ ಸೆಪ್ಟೆಂಬರ್ 10 ರಂದು ನಡೆಯಲಿರುವ ಸೆಮಿಫೈನಲ್ಗೆ ಅರ್ಹತೆ ಪಡೆದಿದೆ.
ಸೆಮಿಫೈನಲ್ನಲ್ಲಿ ಭಾರತ ತಂಡವು ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದ್ದು, ಬಾಂಗ್ಲಾದೇಶ ಅಥವಾ ಯುಎಇ ತಂಡಗಳಲ್ಲಿ ಒಂದು ಭಾರತದ ಎದುರಾಳಿಯಾಗಲಿದೆ.
ಬಿ ಗುಂಪಿನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಯುಎಇ ಮುಖಾಮುಖಿಯಾಗಲಿದ್ದು, ಈ ಪಂದ್ಯದ ಫಲಿತಾಂಶದ ನಂತರ ಭಾರತದ ಎದುರಾಳಿ ಯಾರೆಂಬುದು ಅಧಿಕೃತವಾಗಿ ಖಚಿತವಾಗಲಿದೆ.