
ಕೃತಕ ಬುದ್ಧಿಮತ್ತೆ (AI) ಸಂಸ್ಥೆ ಅಂಥ್ರೋಪಿಕ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಫುಲ್ ಟೈಂ ಎಕ್ಸಿಕ್ಯೂಟಿವ್ ಕಮ್ಯುನಿಕೇಷನ್ಸ್ ರೈಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾಗುವ ಉತ್ತಮ ಅಭ್ಯರ್ಥಿಗೆ ವಾರ್ಷಿಕ 2,95,000 ಡಾಲರ್ನಿಂದ 3,45,000 ಡಾಲರ್ (ಸುಮಾರು 2.78 ಕೋಟಿಯಿಂದ 3.25 ಕೋಟಿ ರೂ.) ವರೆಗೆ ಸಂಬಳ ನೀಡಲಾಗುತ್ತದೆ.
ಕನಿಷ್ಠ ಎಂಟು ವರ್ಷಗಳ ಅನುಭವ ಹೊಂದಿರುವ ಮತ್ತು ತಾಂತ್ರಿಕ ಪರಿಕಲ್ಪನೆಗಳನ್ನು ವೇಗವಾಗಿ ಗ್ರಹಿಸಬಲ್ಲ ಅರ್ಹ ಅಭ್ಯರ್ಥಿಗಳನ್ನು ಲಿಂಕ್ಡ್ಇನ್ ಮೂಲಕ ಆಹ್ವಾನಿಸಲಾಗಿದೆ.