
ತೆಲುಗು ಬಿಗ್ ಬಾಸ್ ಸೀಸನ್ 7ರ ವಿಜೇತ ಪಲ್ಲವಿ ಪ್ರಶಾಂತ್, ತಮಗೆ ಸಿಕ್ಕ 35 ಲಕ್ಷ ರೂ. ಬಹುಮಾನದಲ್ಲಿ 40% ಜಿಎಸ್‌ಟಿ ಕಡಿತವಾಗಿದೆ ಎಂದು ಆರೋಪಿಸಿದ್ದಾರೆ.
ಉಡುಗೊರೆಯಾಗಿ ನೀಡಿದ ಕಾರು ಮತ್ತು ನೆಕ್ಲೇಸ್‌ಗಾಗಿ ಕ್ರಮವಾಗಿ 8.5 ಲಕ್ಷ ಮತ್ತು 5 ಲಕ್ಷ ರೂ.ಗಳನ್ನು ಪ್ರೈಜ್ ಮನಿಯಿಂದಲೇ ಕಡಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಿಫ್ಟ್ ಎಂದು ಹೇಳಿ ಹಣ ವಸೂಲಿ ಮಾಡಿರುವ ಬಿಗ್ ಬಾಸ್ ಆಯೋಜಕರ ಕ್ರಮದ ವಿರುದ್ಧ ಪಲ್ಲವಿ ಪ್ರಶಾಂತ್ ಸರಣಿ ಆರೋಪಗಳನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.