
ಮೀಸಲಾತಿಯ ಲಾಭ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸಿರುವ ಉಳ್ಳವರು, ಸಮಾಜದ ದುರ್ಬಲರಿಗೆ ಅವಕಾಶ ಕಲ್ಪಿಸಲು ಸ್ವಯಂಪ್ರೇರಣೆಯಿಂದ ಮೀಸಲಾತಿಯನ್ನು ಬಿಟ್ಟುಕೊಡಬೇಕು ಎಂದು ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಮುಂಬೈನಲ್ಲಿ 2,000ಕ್ಕೂ ಹೆಚ್ಚು ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಮತ್ತು ತಾರತಮ್ಯ ಇರುವವರೆಗೆ ಮಾತ್ರ ಅದು ಮುಂದುವರಿಯಬೇಕು ಎಂದರು.
ದೆಹಲಿಯಲ್ಲಿ ನಡೆದ ಜೆನ್ ಜೀ ಪ್ರತಿಭಟನೆಗಳನ್ನು ಸಮರ್ಥಿಸಿಕೊಂಡ ಅವರು, ಯುವಕರ ಆತಂಕಗಳು ನ್ಯಾಯಯುತವಾಗಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಂವಾದದ ಒಂದು ರೂಪ ಎಂದು ಅಭಿಪ್ರಾಯಪಟ್ಟರು.