International
ಬ್ರಿಟಿಷ್ ಏರ್‌ವೇಸ್ ವಿಮಾನ ದಿಢೀರ್ ಕುಸಿತ

ಬ್ರಿಟಿಷ್ ಏರ್‌ವೇಸ್ ವಿಮಾನ ದಿಢೀರ್ ಕುಸಿತ

tv9kannada2h
THE BRIEF
1

ಲಂಡನ್‌ನಿಂದ ಅಮೆರಿಕದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್​ವೇಸ್ ಬೋಯಿಂಗ್ ವಿಮಾನವು ಹಾರಾಟ ನಡೆಸುತ್ತಿದ್ದಾಗ ಹಠಾತ್ 9 ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದು ಆತಂಕ ಸೃಷ್ಟಿಸಿದ್ದು, ಪೈಲಟ್‌ಗಳು ತುರ್ತು ಪರಿಸ್ಥಿತಿ ಘೋಷಿಸಿ ವಿಮಾನವನ್ನು ಲಂಡನ್‌ಗೆ ವಾಪಸ್ ತಿರುಗಿಸಿದ್ದಾರೆ.

2

ವಿಮಾನವು 37,000 ಅಡಿ ಎತ್ತರದಲ್ಲಿ ಐರ್ಲೆಂಡ್ ವಾಯುಪ್ರದೇಶದ ಮೇಲೆ ಹಾರುತ್ತಿದ್ದಾಗ ಕೇವಲ ಕೆಲವೇ ನಿಮಿಷಗಳಲ್ಲಿ 28,000 ಅಡಿ ಎತ್ತರಕ್ಕೆ ಇಳಿದಿದ್ದು, ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ '7700' ಟ್ರಾನ್ಸ್‌ಪಾಂಡರ್ ಕೋಡ್ ರವಾನಿಸಿದರು.

3

ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮೊದಲ ಆದ್ಯತೆಯಾಗಿದ್ದು, ಪೈಲಟ್‌ಗಳ ಸಮಯಪ್ರಜ್ಞೆಯಿಂದ ವಿಮಾನವು ಹೀಥ್ರೂನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಹಾಗೂ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬ್ರಿಟಿಷ್ ಏರ್‌ವೇಸ್ ತಿಳಿಸಿದೆ.