
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಸಿಸ್ಟೆಂಟ್, ಯುಡಿಸಿ, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಸೇರಿದಂತೆ ಒಟ್ಟು 242 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಸಿಸ್ಟೆಂಟ್ ವಿಭಾಗದಲ್ಲಿ 120, ಯುಡಿಸಿ 76, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ 22 ಹಾಗೂ ಸ್ಟೆನೋಗ್ರಾಫರ್ ವಿಭಾಗದಲ್ಲಿ 24 ಹುದ್ದೆಗಳಿದ್ದು, ಆಯ್ಕೆಯಾದವರಿಗೆ 7ನೇ ಸಿಪಿಸಿ ನಿಯಮದಂತೆ 25,500 ರೂ. ಮೂಲ ವೇತನ ಸಿಗಲಿದೆ.
ಅಭ್ಯರ್ಥಿಗಳು ಆಗಸ್ಟ್ 16ರೊಳಗೆ ISRO ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು, ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆಯನ್ನು ಒಳಗೊಂಡಿರುತ್ತದೆ.