
ಕೊಲಂಬೊ ಟೆಸ್ಟ್‌ನ ಮೂರನೇ ದಿನದ ಅಂತ್ಯಕ್ಕೆ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿದ್ದು, ಫಾಲೋ-ಆನ್ ತಪ್ಪಿಸಲು ಇನ್ನೂ 39 ರನ್‌ಗಳ ಅಗತ್ಯವಿದೆ.
ಸೋನಾಲ್ ದಿನುಷಾ 85 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ಭಾರತದ ಪರ ಪ್ರಸಿದ್ಧ್ ಕೃಷ್ಣ ಮತ್ತು ಮಾನವ್ ಸುತಾರ್ ತಲಾ 3 ವಿಕೆಟ್ ಪಡೆದು ಮಿಂಚಿದ್ದಾರೆ.
ಮಳೆಯಿಂದಾಗಿ ಮೂರನೇ ದಿನದ ಆಟವನ್ನು ಬೇಗನೇ ಅಂತ್ಯಗೊಳಿಸಲಾಗಿದ್ದು, ಶ್ರೀಲಂಕಾ ತಂಡವು ಭಾರತದ 238 ರನ್‌ಗಳ ಮುನ್ನಡೆಯನ್ನು ಸರಿದೂಗಿಸಲು ಹೋರಾಟ ನಡೆಸುತ್ತಿದೆ.