
‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು’ ಹಾಡಿನ ಗಾಯಕ ರಾಹುಲ್ ಸಿಪ್ಲಿಗಂಜ್ ಮತ್ತು ಅವರ ಸಹೋದರನ ವಿರುದ್ಧ ವಿಶಾಖಪಟ್ಟಣಂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಯುವತಿಯೊಬ್ಬರು ರಾಹುಲ್ ಅವರ ಸಹೋದರ ಸಂಬಂಧಿ ಕರ್ಪುರಪು ರಾಹುಲ್ ರೆಡ್ಡಿ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಬೆದರಿಕೆಯ ದೂರು ನೀಡಿದ್ದಾರೆ.
ಗಾಯಕ ರಾಹುಲ್ ಸಿಪ್ಲಿಗಂಜ್ ಸಹ ತಮಗೆ ಬೆದರಿಕೆ ಹಾಕಿ ಬಲವಂತದ ವಿಡಿಯೋಗಳನ್ನು ಮಾಡಿಸಿದ್ದಾರೆ ಎಂದು ಯುವತಿ ಎಂವಿಪಿ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.