ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗದ ಪರಿಷ್ಕೃತ ಡಿಪಿಆರ್ ಪ್ರಕಾರ ಯೋಜನಾ ವೆಚ್ಚ 25,485 ಕೋಟಿ ರೂ.ಗೆ ಇಳಿಕೆಯಾಗಿದ್ದು, ವಾಣಿಜ್ಯ ಆದಾಯದ ಮೂಲಗಳು ಕಡಿಮೆಯಾಗಿವೆ.
ಹಿಂದಿನ ಡಿಪಿಆರ್‌ನಲ್ಲಿ 17 ನಿಲ್ದಾಣಗಳಿದ್ದ ಸ್ಥಳದಲ್ಲಿ ಈಗ 11 ನಿಲ್ದಾಣಗಳನ್ನು ಮಾತ್ರ ಅಭಿವೃದ್ಧಿಪಡಿಸಲು ಉದ್ದೇಶಿಸಿರುವುದರಿಂದ ಬಿಎಂಆರ್‌ಸಿಎಲ್‌ಗೆ ಆದಾಯದ ಕೊರತೆ ಉಂಟಾಗಲಿದೆ.
ಆದಾಯದ ಮೂಲಗಳು ಕಡಿಮೆಯಾಗಿರುವುದರಿಂದ ಮುಂದಿನ ಮೂರು ವರ್ಷಗಳಲ್ಲಿ ಮೆಟ್ರೋ ಟಿಕೆಟ್ ದರವನ್ನು ಶೇ.12ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.