
ರಾಜ್ಯದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ಗಡಿ ದಾಟಿದ್ದು, ಪ್ರಸ್ತುತ 100.34 ಅಡಿ ನೀರು ಸಂಗ್ರಹವಾಗಿದೆ.
ಆಲಮಟ್ಟಿ ಅಣೆಕಟ್ಟಿಗೆ 1,18,751 ಕ್ಯೂಸೆಕ್ ಮತ್ತು ನಾರಾಯಣಪುರ ಜಲಾಶಯಕ್ಕೆ 1,52,843 ಕ್ಯೂಸೆಕ್ ಭಾರೀ ಒಳಹರಿವು ದಾಖಲಾಗಿದ್ದು, ಜಲಾಶಯಗಳು ಭರ್ತಿಯತ್ತ ಸಾಗಿವೆ.
ಹಾರಂಗಿ ಶೇ.97.12, ಕಬಿನಿ ಶೇ.94.35 ಮತ್ತು ಹಿಡಕಲ್ ಜಲಾಶಯ ಶೇ.88.23 ರಷ್ಟು ಭರ್ತಿಯಾಗಿದ್ದು, ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ.