
ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದ ಆಂಕರ್ ಬುಕ್ಗೆ ಸಾಂಸ್ಥಿಕ ಹೂಡಿಕೆದಾರರಿಂದ ನಿರೀಕ್ಷೆಮೀರಿದ ಸ್ಪಂದನೆ ಸಿಕ್ಕಿದ್ದು, 8,110 ಕೋಟಿ ರೂ ಮೌಲ್ಯದ ಆಂಕರ್ ಬುಕ್ಗೆ ಎರಡೂವರೆ ಲಕ್ಷ ಕೋಟಿ ರೂ ಮೊತ್ತದ ಬಿಡ್ಡಿಂಗ್ ಬಂದಿದೆ.
ಬಿಡ್ ಸಲ್ಲಿಸಿದ ಜಾಗತಿಕ ಹೂಡಿಕೆ ಸಂಸ್ಥೆಗಳಲ್ಲಿ ಬ್ಲ್ಯಾಕ್ರಾಕ್, ಜೆಪಿ ಮಾರ್ಗನ್ ಮತ್ತು ಸಿಂಗಾಪುರ್ ಜಿಐಸಿ ಸೇರಿದಂತೆ ಅನೇಕ ದೇಶ ವಿದೇಶಗಳ ಸಾಂಸ್ಥಿಕ ಹಾಗೂ ಪಿನ್ಷನ್ ಫಂಡ್ ಸಂಸ್ಥೆಗಳು ಭಾಗವಹಿಸಿವೆ.
ಸಾರ್ವಜನಿಕ ಅಥವಾ ರೀಟೇಲ್ ಹೂಡಿಕೆದಾರರಿಗೆ ಅಕ್ಟೋಬರ್ 21ರಿಂದ 23ರವರೆಗೆ ಹೂಡಿಕೆಗೆ ಅವಕಾಶವಿದ್ದು, ಪ್ರತಿ ಷೇರಿಗೆ 1,065 ರಿಂದ 1,119 ರೂ ಬೆಲೆ ನಿಗದಿ ಮಾಡಲಾಗಿದೆ.