
ಚೆನ್ನೈನ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ಅರವಿಂದ್ ಶ್ರೀನಿವಾಸ್, ಇಂದು ಸುಮಾರು 1.6 ಲಕ್ಷ ಕೋಟಿ ರೂಪಾಯಿ ಅಂದರೆ 20 ಬಿಲಿಯನ್ ಡಾಲರ್ ಮೌಲ್ಯದ ಪರ್ಪ್ಲೆಕ್ಸಿಟಿ ಎಐ ಸ್ಟಾರ್ಟ್ಅಪ್ ನ ಸಿಇಒ ಆಗಿ ಬೆಳೆದಿದ್ದಾರೆ.
ಐಐಟಿ ಮದ್ರಾಸ್ ನಲ್ಲಿ ಕಂಪ್ಯೂಟರ್ ಸೈನ್ಸ್ ಬಯಸಿದ್ದ ಅವರಿಗೆ ಕೇವಲ 0.01 ಸಿಜಿಪಿಎ ಅಂಕಗಳ ಕೊರತೆಯಿಂದ ಆ ಸೀಟ್ ತಪ್ಪಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಸಿಕ್ಕಿತ್ತು ಮತ್ತು ಎಂಐಟಿ ಕೂಡ ಅವರನ್ನ ತಿರಸ್ಕರಿಸಿತ್ತು.
ಸೋಲುಗಳಿಗೆ ಕುಗ್ಗದೆ ಸ್ವಯಂ ಕೋಡಿಂಗ್ ಕಲಿತು, ಗೂಗಲ್ ಡೀಪ್ ಮೈಂಡ್ ಮತ್ತು ಓಪನ್ ಎಐನಲ್ಲಿ ಕೆಲಸ ಮಾಡಿ, ಆಗಸ್ಟ್ 2022ರಲ್ಲಿ ಪರ್ಪ್ಲೆಕ್ಸಿಟಿ ಎಐ ಸಂಸ್ಥೆಯನ್ನು ಹುಟ್ಟುಹಾಕಿದರು.