
ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಅಕ್ಟೋಬರ್ 30ರಂದು ಶಾಸಕ ರಮೇಶ್ ಜಾರಕಿಹೊಳಿ ಗನ್ಮ್ಯಾನ್ ಚಿದಾನಂದ ಕುರಬೆಟ್ ನೇತೃತ್ವದ ಏಳು ಜನರ ತಂಡವು 2.68 ಕೋಟಿ ರೂ. ಹಣ ದರೋಡೆ ಮಾಡಲು ಯತ್ನಿಸಿದೆ.
ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಹಣ ಸಂಗ್ರಹಿಸಿ ಕರೆಸಿದ್ದ ಆರೋಪಿಗಳು ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ನಡೆಸಲು ಯತ್ನಿಸಿದಾಗ, ಸ್ಥಳದಲ್ಲಿದ್ದ ಇತರರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು 2.39 ಕೋಟಿ ರೂ. ವಶಪಡಿಸಿಕೊಂಡಿದ್ದು, ಗನ್ಮ್ಯಾನ್ ಚಿದಾನಂದ ಅವರನ್ನು ಬೆಳಗಾವಿ ಎಸ್ಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.