
ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ, ಕೆಂಪು ಬಾಳೆ ಮತ್ತು ಕಬ್ಬು ಆಧಾರಿತ ಜೈವಿಕ ಆರ್ಥಿಕತೆಯನ್ನು ನಿರ್ಮಿಸಲು ಬೆಂಗಳೂರು ಜೈವಿಕ-ಆರ್ಥಿಕ ಮಿಷನ್ ಕೇಂದ್ರವು ಹೊಸ ಮಾರ್ಗಸೂಚಿಯನ್ನು ಮಂಡಿಸಿದೆ.
ಕಲಬುರಗಿಯಲ್ಲಿ ಸ್ಥಳೀಯವಾಗಿ ಬೆಳೆಯುವ ಕಾಳುಗಳನ್ನು ಬಳಸಿ 6 ಬಗೆಯ ರೆಡಿ ಟು ಈಟ್ ಎನರ್ಜಿ ಬಾರ್‌ಗಳನ್ನು ತಯಾರಿಸಿ ಪ್ರಾಯೋಗಿಕವಾಗಿ ಪರಿಚಯಿಸಲಾಗಿದ್ದು, ಮೌಲ್ಯವರ್ಧನೆಗೆ ಒತ್ತು ನೀಡಲಾಗಿದೆ.
ಬಚಾವತ್ ಆಯೋಗದ ಐತೀರ್ಪಿನಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ 15 ಟಿಎಂಸಿ ಭೀಮಾ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನೀರಾವರಿ ಮೂಲಸೌಕರ್ಯ ನಿರ್ಮಾಣದ ಬಗ್ಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.