
ಮಧ್ಯಪ್ರದೇಶದ 16 ವರ್ಷದ ವ್ಯಾಸ್ಜಿ ಮಿಶ್ರಾ ನೀರನ್ನು ಬಳಸಿ ಸೀಮೆಎಣ್ಣೆ ಸ್ಟವ್ ಉರಿಸುವ ನೂತನ ಹೈಬ್ರಿಡ್ ಸ್ಟವ್ ಅನ್ನು ಆವಿಷ್ಕರಿಸಿದ್ದಾರೆ.
ಈ ಉಪಕರಣದಲ್ಲಿ ಎರಡು ಪ್ರತ್ಯೇಕ ಟ್ಯಾಂಕ್ಗಳಿದ್ದು, ಕಾದ ಬರ್ನರ್ ಸ್ಪರ್ಶಿಸಿದ ನೀರು ಹಾವಿಯಾಗಿ ಪರಿವರ್ತಿತಗೊಂಡು ಉರಿಯಲು ಆರಂಭಿಸುತ್ತದೆ.
ಐಐಟಿ ಗುವಾಹಾಟಿ ನಡೆಸಿದ ಪರಿಶೀಲನೆಯಲ್ಲಿ ಈ ತಂತ್ರಜ್ಞಾನವು ಕನಿಷ್ಠ ಶೇಕಡ 20ರಷ್ಟು ಸೀಮೆಎಣ್ಣೆಯನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ದೃಢಪಟ್ಟಿದೆ.