
ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಟ ಇಮ್ರಾನ್ ಖಾನ್ಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡು, ಓಸಿಐ ಕಾರ್ಡ್ದಾರರು ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಎಚ್ಚರಿಸಿದೆ.
ಇಮ್ರಾನ್ ಖಾನ್ ತಮ್ಮ ತಪ್ಪಿಗೆ ಬೇಷರತ್ ಕ್ಷಮೆಯಾಚಿಸಿ ಅಫಿಡವಿಟ್ ಸಲ್ಲಿಸಿದ್ದು, ಭಾರತ ಮತ್ತು ಸಂವಿಧಾನದ ಮೇಲಿನ ಗೌರವವನ್ನು ವ್ಯಕ್ತಪಡಿಸಿದ್ದಾರೆ.
ನಟನ ಕ್ಷಮೆಯನ್ನು ಪರಿಗಣಿಸಿರುವ ನ್ಯಾಯಪೀಠ, ಅವರಿಗೆ ನೀಡಲಾಗಿದ್ದ ದೇಶ ತೊರೆಯುವ ನೋಟಿಸ್ ಮೇಲಿನ ಮಧ್ಯಂತರ ತಡೆಯಾಜ್ಞೆಯನ್ನು ಡಿಸೆಂಬರ್ 7ರವರೆಗೆ ವಿಸ್ತರಿಸಿದೆ.