
ಡಬ್ಲ್ಯೂಪಿಎಲ್ 2027 ಆರಂಭಕ್ಕೂ ಮುನ್ನ ಆರ್ಸಿಬಿ ಮಾಜಿ ಸ್ಟಾರ್ ಬೌಲರ್ ರೇಣುಕಾ ಸಿಂಗ್ ಠಾಕೂರ್, ಆರ್ಸಿಬಿ ಪರ ಆಡುವಾಗ ತೀವ್ರ ಮಾನಸಿಕ ಒತ್ತಡ ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.
ಆರ್ಸಿಬಿ 1.50 ಕೋಟಿ ರೂಪಾಯಿಗೆ ಖರೀದಿಸಿದ್ದರೂ, ಮೊದಲ ಸೀಸನ್ನಲ್ಲಿ 6 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದು ಹೆಚ್ಚು ರನ್ ನೀಡಿದ್ದರಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಯೋಚಿಸಿದ್ದಾಗಿ ರೇಣುಕಾ ಹೇಳಿದ್ದಾರೆ.
ಸತತ ವೈಫಲ್ಯಗಳಿಂದ ಕಂಗೆಟ್ಟಿದ್ದ ರೇಣುಕಾ, ನಾಯಕಿ ಸ್ಮೃತಿ ಮಂಧನಾ ಬಳಿ ಹೋಗಿ ತಮಗೆ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ.