
ಉತ್ತಮ ಆಡಳಿತಕ್ಕೆ ರಾಮರಾಜ್ಯದ ಆದರ್ಶಗಳು ಸದಾ ಕಾಲಕ್ಕೂ ಮಾನದಂಡವಾಗಿ ಮುಂದುವರಿಯಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ವಿಜಯದಶಮಿ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ನ್ಯಾಯ, ಸಮಾನ ಅವಕಾಶಗಳು ದೊರಕುವ ವ್ಯವಸ್ಥೆಯೇ ರಾಮರಾಜ್ಯ ಎಂದರು.
ರಾಷ್ಟ್ರಹಿತದ ವಿಷಯಕ್ಕೆ ಬಂದಾಗ ದೇಶದ ಎಲ್ಲಾ ರಾಜಕೀಯ ಪಕ್ಷಗಳು, ಸಾಂಸ್ಥಿಕ ವ್ಯವಸ್ಥೆಗಳು ಮತ್ತು ಪ್ರಜೆಗಳು ಒಂದಾಗಬೇಕು ಎಂದು ಕರೆ ನೀಡಿದರು.