
ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ನೆಪವಾಗಿರಿಸಿಕೊಂಡು ರೈತರನ್ನು ಮರೆತಿದೆ ಎಂದು ಜೆಡಿಎಸ್ನ ಟಿ.ಎ.ಶರವಣ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಮೂರೂವರೆ ವರ್ಷದಲ್ಲಿ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತಕ್ಷಣವೇ ಪರಿಹಾರ ಘೋಷಿಸಿ, ಇಲ್ಲವೇ ದಿವಾಳಿಯಾಗಿದೆ ಎಂದು ಒಪ್ಪಿಕೊಂಡು ಕೇಂದ್ರದ ನೆರವು ಕೇಳಿ ಎಂದು ಸವಾಲು ಹಾಕಿದರು.