
ಇಂದೋರ್‌ನ ಶಿಶುಕುಂಜ್ ಶಾಲೆಯ ಮೂವರು ವಿದ್ಯಾರ್ಥಿಗಳು ವಿದ್ಯುತ್ ಇಲ್ಲದೆ ಉಪ್ಪಿನ ಸಹಾಯದಿಂದ ಲಸಿಕೆಗಳನ್ನು ತಂಪಾಗಿಡಬಲ್ಲ ‘ಥರ್ಮಾವಾಲ್ಟ್’ ಎಂಬ ಪೋರ್ಟಬಲ್ ಸಾಧನವನ್ನು ಆವಿಷ್ಕರಿಸಿದ್ದಾರೆ.
ವಿದ್ಯಾರ್ಥಿಗಳ ಈ ನೂತನ ತಂತ್ರಜ್ಞಾನಕ್ಕೆ ಏಷ್ಯಾ ಪ್ರಾಂತ್ಯದ 2025ರ ಪ್ರತಿಷ್ಠಿತ Earth Prize ಪ್ರಶಸ್ತಿಯೊಂದಿಗೆ $12,500 ಡಾಲರ್ ಅನುದಾನ ದೊರೆತಿದೆ.
ತಂಡವು ಮುಂಬರುವ ದಿನಗಳಲ್ಲಿ 200 ಸಾಧನಗಳನ್ನು ಸಿದ್ಧಪಡಿಸಿ 120 ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲು ಹಾಗೂ ಡಬ್ಲ್ಯುಎಚ್‌ಒ (WHO) ಪ್ರಮಾಣಪತ್ರ ಪಡೆಯಲು ಗುರಿ ಹೊಂದಿದೆ.