
ಕೋಲಾರ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 2,010 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 16 ಹೆಚ್1ಎನ್1 (H1N1) ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಸೋಂಕಿತರಿಗೆ ಚಿಕಿತ್ಸೆ ನೀಡಲು ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ 12 ಬೆಡ್‌ಗಳ ವಿಶೇಷ ಐಸೋಲೇಶನ್ ವಾರ್ಡ್ ಮತ್ತು ರ‍್ಯಾಪಿಡ್ ರೆಸ್ಪಾನ್ಸ್ ಬೆಡ್‌ಗಳನ್ನು ಸಜ್ಜುಗೊಳಿಸಲಾಗಿದೆ.
ಆರೋಗ್ಯ ಇಲಾಖೆಯು ಆಸ್ಪತ್ರೆಯಲ್ಲಿ 'ಓಸೆಲ್ಟಾಮಿವಿರ್' ಮಾತ್ರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ನೈರ್ಮಲ್ಯ ಪಾಲಿಸಲು ಸೂಚನೆ ನೀಡಿದೆ.