
ಉಜ್ಬೆಕಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್‌ನ ವಿದ್ಯಾರ್ಥಿಗಳು ಅಚ್ಚರಿಯ ಗೌರವ ಸಲ್ಲಿಸಿದರು.
ಮೋದಿ ಅವರು ರಾಜಕೀಯಕ್ಕೆ ಬರುವ ಮುನ್ನ ಬರೆದಿದ್ದ 'ಅಭಿ ತೋ ಸೂರಜ್ ಉಗಾ ಹೈ' ಸೇರಿದಂತೆ ಹಲವು ಕವಿತೆಗಳನ್ನು ವಿದ್ಯಾರ್ಥಿಗಳು ಹಿಂದಿ ಮತ್ತು ಉಜ್ಬೆಕ್ ಭಾಷೆಗಳಲ್ಲಿ ಹಾಡಿದರು.
ತಮ್ಮ ಕವಿತೆಗಳನ್ನು ವಿದೇಶಿ ವಿದ್ಯಾರ್ಥಿಗಳ ಬಾಯಲ್ಲಿ ಕೇಳಿದ ಪ್ರಧಾನಿ ಮೋದಿ ಭಾವುಕರಾದರು ಎಂದು ವರದಿಯಾಗಿದೆ.