
ಮಳೆ ಹಾಗೂ ಬೆಳೆ ಇಲ್ಲದೆ ಬರದಿಂದ ನಲುಗಿರುವ ಕರ್ನಾಟಕದ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಪ್ರತಿ ರೈತನಿಗೆ 2500 ರೂಪಾಯಿ ಬರ ಪರಿಹಾರ ಘೋಷಿಸಲಾಗಿದೆ.
ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸದನದಲ್ಲಿ ಈ ಘೋಷಣೆ ಮಾಡಿದ್ದು, ಮೊದಲ ಹಂತದಲ್ಲಿ ತಕ್ಷಣವೇ 1250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತಿದೆ.
ಈ ಪರಿಹಾರವು 40 ರಿಂದ 50 ಲಕ್ಷ ರೈತರಿಗೆ ತಕ್ಷಣವೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದ್ದು, ಪ್ರತಿ ಎಕರೆಗೆ ಅಥವಾ ಹೆಕ್ಟರ್‌ಗೆ ಎಂಬ ಸ್ಪಷ್ಟತೆ ಅಧಿಕೃತ ಆದೇಶದ ಬಳಿಕ ಸಿಗಲಿದೆ.