
ಮಸಾಲೆ ಉತ್ಪನ್ನಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಮತ್ತು ಕೃತಕ ಬಣ್ಣಗಳ ಬಳಕೆಯಾಗುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ, ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಮಸಾಲೆಗಳ ಮೇಲೆ ತೀವ್ರ ನಿಗಾ ವಹಿಸಿದೆ.
ಎವರೆಸ್ಟ್ ಮತ್ತು ಎಲ್ಜಿ ಕಂಪನಿಗಳ ಇಂಗು ಉತ್ಪನ್ನಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಿದ್ದರಿಂದ ಅವುಗಳ ಮಾರಾಟವನ್ನು ನಿಷೇಧಿಸಲಾಗಿದ್ದು, ಇದೀಗ ಸಾಂಬಾರ್ ಪೌಡರ್, ಅರಿಶಿನ ಮತ್ತು ಖಾರದ ಪುಡಿಯ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗುತ್ತಿದೆ.
ಸಂಗ್ರಹಿಸಿದ ಮಾದರಿಗಳನ್ನು NABL ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದ್ದು, ಅನುಮೋದಿತ ಮಿತಿಗಿಂತ ಹೆಚ್ಚು ಕೆಮಿಕಲ್ ಪತ್ತೆಯಾದರೆ ತಯಾರಕ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಇಲಾಖೆ ನಿರ್ಧರಿಸಿದೆ.