
2016ಕ್ಕಿಂತ ಮೊದಲು ತಯಾರಾದ BS-III ವಾಹನಗಳಲ್ಲಿ ಇ20 ಇಂಧನ ಬಳಸುವಾಗ ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್ಗಳನ್ನು ಬದಲಾಯಿಸಬೇಕಾಗಬಹುದು ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
IOCL ಮತ್ತು SIAM ಸಂಸ್ಥೆಗಳ ಜಂಟಿ ಪರೀಕ್ಷೆಯ ಪ್ರಕಾರ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಎಂಜಿನ್ ಬದಲಾಯಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು 30 ಕೋಟಿ ವಾಹನಗಳ ಮೇಲೆ ಇ20 ಪರಿಣಾಮ ಬೀರಲಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಸರ್ಕಾರ 10 ಅಂಶಗಳ ಸ್ಪಷ್ಟೀಕರಣ ನೀಡಿದೆ.