
2023ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಹಿಂದಿ ಸಿನಿಮಾ ‘ಕಿಲ್’ನ ನಿರ್ದೇಶಕ ನಿಖಿಲ್ ನಾಗೇಶ್ ಭಟ್ ಹಾಲಿವುಡ್ಗೆ ಹೊರಟಿದ್ದು, ಆಸ್ಕರ್ ವಿಜೇತ ಸ್ಟಾರ್ ನಟ ಜೇಮಿ ಫಾಕ್ಸ್ ಜೊತೆಗೆ ‘ಡೆಡ್ಲಾಕ್ಡ್’ ಹೆಸರಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
ನಿಖಿಲ್ ಭಟ್ ನಿರ್ದೇಶನದ ‘ಕಿಲ್’ ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತ್ತು ಮತ್ತು 2024ರಲ್ಲಿ ಥಿಯೇಟರ್ಗಳಲ್ಲಿ ಬಿಡುಗಡೆಯಾಗುವ ಮೊದಲು ಲಯನ್ಸ್ಗೇಟ್ ಸಂಸ್ಥೆಗೆ ದೊಡ್ಡ ಮೊತ್ತಕ್ಕೆ ಮಾರಾಟವಾಯಿತು.
‘ಕಿಲ್’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ 47 ಕೋಟಿಗೂ ಹೆಚ್ಚು ಹಣ ಗಳಿಸಿದ್ದು, ಲಕ್ಷ್ಯ ಅವರ ಅತ್ಯುತ್ತಮ ನಟನೆ ಸೇರಿದಂತೆ ಆರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.