
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಡಿಕೇರಿಯ ಎಫ್ಎಂಸಿ ಕಾಲೇಜು ಹಿಂಭಾಗದ ಖಾಸಗಿ ಲೇಔಟ್ನಲ್ಲಿ ನಿರ್ಮಾಣ ಹಂತದ ಮನೆ ಕುಸಿದಿದೆ.
ನಿವೃತ್ತ ಎಎಸ್ಐ ಬಿದ್ದಪ್ಪ ಅವರಿಗೆ ಸೇರಿದ ಮನೆಯ ತಡೆಗೋಡೆ ಮಣ್ಣಿನ ಒತ್ತಡಕ್ಕೆ ಸಿಲುಕಿ ಕುಸಿದಿದ್ದು, ಇಡೀ ಮನೆಗೆ ಅಪಾಯ ಎದುರಾಗಿದೆ.
ಗೃಹಪ್ರವೇಶಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದ್ದು, ಮಣ್ಣು ಕುಸಿಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.