
ವಿಶ್ವ ಚಿನ್ನ ಸಮಿತಿಯ ವರದಿಯಂತೆ, ಆಮದು ಸುಂಕ ಏರಿಕೆಯಿಂದಾಗಿ ಜೂನ್ ತ್ರೈಮಾಸಿಕದಲ್ಲಿ ದೇಶದ ಚಿನ್ನದ ಬೇಡಿಕೆ 139.7 ಟನ್ನಿಂದ 131.4 ಟನ್ಗೆ ಅಂದರೆ ಶೇ 6ರಷ್ಟು ಇಳಿಕೆಯಾಗಿದೆ.
ಚಿನ್ನದ ಬೇಡಿಕೆ ತೂಕದಲ್ಲಿ ಕಡಿಮೆಯಾದರೂ, ಹಣಕಾಸಿನ ಮೌಲ್ಯದಲ್ಲಿ ಕಳೆದ ವರ್ಷದ ₹1.32 ಲಕ್ಷ ಕೋಟಿಯಿಂದ ಈ ಬಾರಿ ₹1.98 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಜೂನ್ ತ್ರೈಮಾಸಿಕದಲ್ಲಿ ಆರ್ಬಿಐ 200 ಕೆ.ಜಿ ಚಿನ್ನ ಖರೀದಿಸಿದ್ದು, ದೇಶದ ಒಟ್ಟು ಚಿನ್ನದ ಆಮದು ಶೇ 23ರಷ್ಟು ಕುಸಿದು 98.1 ಟನ್ಗೆ ತಲುಪಿದೆ.