
ಮಲಯಾಳಂ ನಟ ದುಲ್ಕರ್ ಸಲ್ಮಾನ್ ತಮ್ಮ ಹೆಸರಿನಲ್ಲಿರುವ ನಕಲಿ ಎಕ್ಸ್ (ಟ್ವಿಟರ್) ಖಾತೆಯ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದು, ಅದು ಸಿನಿಮಾಗಳು, ಇತರೆ ನಟರು ಹಾಗೂ ಕುಟುಂಬದ ಸದಸ್ಯರ ಬಗ್ಗೆ ನಕಲಿ ಪೋಸ್ಟ್ಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ದುಲ್ಕರ್ ಸಲ್ಮಾನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, '@_dulQuer ಎಂಬ ಅಕೌಂಟ್ ನನ್ನ ನಿಜವಾದ ಖಾತೆ ಎಂದು ನಂಬಬೇಡಿ, ಇದು ನಕಲಿ ಅಕೌಂಟ್' ಎಂದು ಪೋಸ್ಟ್ ಮಾಡಿದ್ದಾರೆ.
ನಕಲಿ ಖಾತೆಯ ವಿರುದ್ಧ ಅಧಿಕೃತ ದೂರು ನೀಡಿದ್ದು, 'ಎಕ್ಸ್' ಸಂಸ್ಥೆಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ದುಲ್ಕರ್ ತಿಳಿಸಿದ್ದಾರೆ. ಅವರ ಪೋಸ್ಟ್ ಬೆನ್ನಲ್ಲೇ, ನಕಲಿ ಖಾತೆ ನಿರ್ವಹಿಸುತ್ತಿದ್ದ ಅಭಿಮಾನಿ ಕ್ಷಮೆಯಾಚಿಸಿ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.