
ಕರ್ನಾಟಕದಲ್ಲಿ 2026ರ ಜುಲೈನಿಂದ ಸೆಪ್ಟೆಂಬರ್ ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಬಿಯರ್ ಮಾರಾಟವು ಶೇ 49.69ರಷ್ಟು ಏರಿಕೆಯಾಗಿದೆ.
ಈ ಅವಧಿಯಲ್ಲಿ ಒಟ್ಟು 126.68 ಲಕ್ಷ ಕೇಸ್ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಬಿಯರ್ನಿಂದಲೇ 3,377.88 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಕಡಿಮೆ ಅಬಕಾರಿ ಸುಂಕ ಹಾಗೂ ದೀರ್ಘಕಾಲ ಮುಂದುವರಿದ ಬಿಸಿಲಿನ ವಾತಾವರಣದಿಂದ ಬೇಡಿಕೆ ಹೆಚ್ಚಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.