
ಕರ್ನಾಟಕದ ಭತ್ತದ ಕಣಜವೆನಿಸಿದ ಕೊಪ್ಪಳ ಜಿಲ್ಲೆಯ ಗಂಗಾವತಿ ಪ್ರದೇಶದಲ್ಲಿ ತೀವ್ರ ಬರಗಾಲದಿಂದಾಗಿ ಭತ್ತದ ಉತ್ಪಾದನೆ ಕುಸಿದಿದ್ದು, ಅಕ್ಕಿ ದರದಲ್ಲಿ ಭಾರಿ ಏರಿಕೆಯಾಗಿದೆ.
ಕಳೆದ 15 ದಿನಗಳಿಂದ ಒಂದು ತಿಂಗಳ ಅವಧಿಯಲ್ಲಿ ಸೋನಾ ಮಸೂರಿ ಸೇರಿದಂತೆ ವಿವಿಧ ಅಕ್ಕಿ ತಳಿಗಳ ಬೆಲೆ ಕ್ವಿಂಟಾಲ್ಗೆ 2,000 ರಿಂದ 2,500 ರೂಪಾಯಿಗಳವರೆಗೆ ಹೆಚ್ಚಳ ಕಂಡಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ಮುಂಗಾರು ಹಾಗೂ ಎರಡನೇ ಬೆಳೆ ಸಿಗದೆ ರೈಸ್ಮಿಲ್ಗಳು ಬಂದ್ ಆಗಿದ್ದು, ರಾಜ್ಯಾದ್ಯಂತ ಅಕ್ಕಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.