ಬಿಡಿಎ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿರುವ ಅನಧಿಕೃತ ಮನೆಗಳ ಮಾಲೀಕತ್ವ ಪಡೆಯಲು ವಿಧಿಸುತ್ತಿದ್ದ ಶುಲ್ಕವನ್ನು ಶೇ 50ರಷ್ಟು ಇಳಿಸುವ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿದೆ.
ಈ ತಿದ್ದುಪಡಿ ಜಾರಿಗೆ ಬಂದ ಎರಡು ವರ್ಷದೊಳಗೆ ಮಾಲೀಕತ್ವದ ಹಕ್ಕು ಪಡೆಯದಿದ್ದರೆ ನಿವಾಸಿಗಳನ್ನು ತೆರವುಗೊಳಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬಿಡಿಎ ಆಯುಕ್ತರ ಆರ್ಥಿಕ ಮಂಜೂರಾತಿ ಮಿತಿಯನ್ನು 50 ಲಕ್ಷ ರೂಪಾಯಿಯಿಂದ 5 ಕೋಟಿ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಗೂ ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.