
ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮುಂಬೈನಲ್ಲಿ ತುರ್ತು ಸಭೆ ನಡೆಸಿ, ಆಟಗಾರರ ದೈಹಿಕ ಸಾಮರ್ಥ್ಯ ಕುಸಿಯಲು ಅತಿಯಾದ ಪಂದ್ಯಗಳ ಒತ್ತಡವೇ ಕಾರಣ ಎಂದು ಒಪ್ಪಿಕೊಂಡಿದೆ.
ಇಂಗ್ಲೆಂಡ್ ಪ್ರವಾಸದ 15 ಆಟಗಾರರ ಪೈಕಿ 3-4 ಮಂದಿ ಸರಣಿಯ ಮಧ್ಯದಲ್ಲೇ ಗಾಯಗೊಂಡಿದ್ದು, ಐಪಿಎಲ್ನಂತಹ ಕಠಿಣ ಟೂರ್ನಿಗಳ ನಂತರ ವಿಶ್ರಾಂತಿಯ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ, ಇನ್ನು ಮುಂದೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರರನ್ನು ತರಾತುರಿಯಲ್ಲಿ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಮತ್ತು ವಿದೇಶಿ ಪ್ರವಾಸಗಳಿಗೆ ಹೆಚ್ಚಿನ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.