
ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಜಯಭೇರಿ ಬಾರಿಸಿ, 4ನೇ ಬಾರಿಗೆ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಪ್ರತಿಸ್ಪರ್ಧಿ ಫ್ಲೇವಿಯೋ ಬೋಲ್ಸೊನಾರೋ ವಿರುದ್ಧ ನಡೆದ ನೇರ ಪೈಪೋಟಿಯಲ್ಲಿ ಲುಲಾ ಶೇ. 51.75ರಷ್ಟು ಮತ ಗಳಿಸಿದರೆ, ಬೋಲ್ಸೊನಾರೋ ಶೇ. 48.25ರಷ್ಟು ಮತ ಪಡೆದರು.
81 ವರ್ಷ ವಯಸ್ಸಿನ ಲುಲಾ ಅವರು ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ರನ್ ಆಫ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದು, ಬ್ರೆಜಿಲ್ ರಾಜಕೀಯ ಇತಿಹಾಸದಲ್ಲಿ ಈ ಸಾಧನೆ ಮಾಡಿದವರಾಗಿದ್ದಾರೆ.