
ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ 17,97,193 ಫಲಾನುಭವಿಗಳಿಗೆ ದಾಖಲೆಗಳ ಪರಿಶೀಲನೆಗಾಗಿ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಒಟ್ಟು 83,12,411 ಪಿಂಚಣಿದಾರರ ಪೈಕಿ 23,14,450 ಮಂದಿಯ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈವರೆಗೆ 5.17 ಲಕ್ಷ ಮಂದಿ ದಾಖಲೆಗಳನ್ನು ಮರುಸಲ್ಲಿಸಿದ್ದಾರೆ.
ನೋಟಿಸ್ ತಲುಪಿದ 30 ದಿನಗಳ ಒಳಗಾಗಿ ವಯಸ್ಸು, ಆದಾಯ ಮತ್ತು ವಿಳಾಸದ ದಾಖಲೆಗಳನ್ನು ತಹಶೀಲ್ದಾರ್ ಕಚೇರಿಗೆ ಸಲ್ಲಿಸದಿದ್ದರೆ ಪಿಂಚಣಿ ರದ್ದುಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.